ಭಾರತೀಯ ರಿಸರ್ವ್ ಬ್ಯಾಂಕ್‍ನ ಗವರ್ನರ್ ದೇಶದ ಕೇಂದ್ರೀಯ ಬ್ಯಾಂಕ್ ಆದ ಭಾರತೀಯ ರಿಸರ್ವ್ ಬ್ಯಾಂಕ್‍ನ (ಆರ್ ಬಿ ಐ) ಅತ್ಯಂತ ಹಿರಿಯ ಬ್ಯಾಂಕರ್. ೧೯೩೫ರಲ್ಲಿ ಅದರ ಸ್ಥಾಪನೆಯಾದಾಗಿನಿಂದ, ಆರ್ ಬಿ ಐ 25 ಗವರ್ನರ್‍ಗಳನ್ನು ಕಂಡಿದೆ. ಸರ್ ಆಜ಼್ಬರ್ನ್ ಸ್ಮಿತ್ ಮೊದಲ ಗವರ್ನರ್ ಆಗಿದ್ದರೆ, ಈ ಸ್ಥಾನವನ್ನು ಪ್ರಸಕ್ತ ಶಕ್ತಿಕಾಂತಾ ದಾಸ್ ಅಲಂಕರಿಸಿದ್ದಾರೆ, ಮತ್ತು ಅವರು 2021ರವರೆಗೆ ಅಧಿಕಾರದಲ್ಲಿರುತ್ತಾರೆ. == ೨೦೧೬ == ೨೯-೧೨-೨೦೧೬ ಉರ್ಜಿತ್‌ ಪಟೇಲ್‌ ಅವರು ಆರ್‌ಬಿಐ ಗವರ್ನರ್‌ ಆಗಿ ನೇಮಕವಾದ ಬಳಿಕ ತೆರವಾಗಿದ್ದ ಸ್ಥಾನಕ್ಕೆ ಆಚಾರ್ಯ ಅವರನ್ನು ಕೇಂದ್ರ ಸರ್ಕಾರ ಬುಧವಾರ ನೇಮಕ ಮಾಡಿದೆ. ಅವರು ಸದ್ಯ, ನ್ಯೂಯಾರ್ಕ್‌ ವಿಶ್ವವಿದ್ಯಾಲಯದ ಹಣಕಾಸು ವಿಭಾಗದಲ್ಲಿ ಆರ್ಥಶಾಸ್ತ್ರದ ಪ್ರಾಧ್ಯಾಪಕರಾಗಿದ್ದಾರೆ. ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಡೆಪ್ಯುಟಿ ಗವರ್ನರ್‌ ಆಗಿ ವಿರಲ್‌ ವಿ. ಆಚಾರ್ಯ ಅವರು 3 ವರ್ಷಗಳ ಅವಧಿಗೆ ಬುಧವಾರ ನೇಮಕಗೊಂಡಿದ್ದಾರೆ. == ಭಾರತೀಯ ರಿಸರ್ವ್ ಬ್ಯಾಂಕ್‍ನ ಗವರ್ನರ್‌ಗಳ ಪಟ್ಟಿ == == ನೋಡಿ == ಭಾರತೀಯ ರಿಸರ್ವ್ ಬ್ಯಾಂಕ್ ಆರ್.ಬಿ.ಐ == ಉಲ್ಲೇಖ ==